ಪಂಜಿಕಲ್ಲು ಮದ್ರಸದಲ್ಲಿ 74 ನೇ ಸ್ವಾತಂತ್ರ್ಯ ‌ದಿನ ಆಚರಣೆ










ಪಂಜಿಕಲ್ಲು : ನಮ್ಮ ದೇಶವು ಬ್ರಿಟಿಷ್‌ ಆಳ್ವಿಕೆಯಿಂದ ಮುಕ್ತಿಗೊಂಡು ಸ್ವಾತಂತ್ರ್ಯ ಹೊಂದಿ ಇಂದಿಗೆ 73 ವರ್ಷ ತುಂಬಿದೆ. 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು   ತನ್ಮಿಯತುಲ್ ಇಸ್ಲಾಂ ಮದ್ರಸ, ಪಂಜಿಕಲ್ಲು (ರಿ.8588) ಮತ್ತು SKSSF ಪಂಜಿಕಲ್ಲು ಶಾಖೆ‌ಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ದುವಾ ನೇತೃತ್ವವನ್ನು ಸ್ಥಳೀಯ ಸದರ್ ಉಸ್ತಾದರಾದ ಬಹು| ಖಾಸಿಂ ದಾರಿಮಿ ಕಿನ್ಯ ನೇರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಅಂದಿನ ಜೀವನ ಶೈಲಿ ಕುರಿತು ಬಹು| ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಷಣಗೈದರು. ಮದ್ರಸ ಆಡಳಿತ ಕಮಿಟಿಯ ಗೌರಾವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಪಂಜಾಜೆ, ಅಧ್ಯಕ್ಷರಾದ ಮುಹಮ್ಮದ್ ಪಂಜಾಜೆ ಮತ್ತು SKSSF ಪಂಜಿಕಲ್ಲು ಯುನಿಟ್ ಅಧ್ಯಕ್ಷರಾದ ರಝಾಕ್ ಮಂಚಿ ಅವರು ಧ್ವಜಾರೋಹಣ ನೇರವೇರಿಸಿದರು.

 ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್ ಹಾಗೂ ಇನ್ನಿತರ ಹೋರಾಟಗಾರ ಕುರಿತು ನಿಝಾಂ ಮತ್ತು ತಖಿಯುದ್ದೀನ್ ಹಾಡುವ ಮೂಲಕ ಸ್ಮರಣಿಸಿದರು. ಈ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು, ಆಡಳಿತ ಕಮಿಟಿ ಪದಾಧಿಕಾರಿಗಳು, ಊರಿನ ನಾಗರಿಕರು ಭಾಗಿಯಾದರು.

Post a Comment

0 Comments